ಕೊರೊನಾವೈರಸ್ ಟೆಕ್ ಹ್ಯಾಂಡ್‌ಬುಕ್ ಎಂಬುದು --2 ಕೊರೊನಾವೈರಸ್ ಬಗ್ಗೆ ಮಾಹಿತಿಯನ್ನು ಕ್ರೌಡ್‌ಸೋರ್ಸ್ ಮಾಡಲು ವಿನ್ಯಾಸಗೊಳಿಸಲಾದ ಜಾಲತಾಣ ಆಗಿದೆ. ಇದನ್ನು ಇಂಗ್ಲೆಂಡ್‌ನ ಲಂಡನ್‌ನಲ್ಲಿನ ರಾಜಕೀಯದ ಹ್ಯಾಕ್ಸ್‌ಪೇಸ್‌ನ ನ್ಯೂಸ್‌ಪೀಕ್ ಹೌಸ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮಾರ್ಚ್ ೨೦೨೦ ರಲ್ಲಿ ಪ್ರಾರಂಭವಾದ ಈ ಸೈಟ್ ಅನ್ನು ಗೂಗಲ್ ದಾಖಲೆಗಳ ಸರಣಿಯಾಗಿ ಹೋಸ್ಟ್ ಮಾಡಲಾಗಿದೆ. ಇದರ ಉದ್ದೇಶ : ಕೊರೊನಾವೈರಸ್ ಪ್ರಕೋಪ ಮತ್ತು ನಂತರದ ಪರಿಣಾಮಗಳಿಗೆ ತ್ವರಿತ ಮತ್ತು ಅತ್ಯಾಧುನಿಕ ಪ್ರತಿಕ್ರಿಯೆಗೆ ತಂತ್ರಜ್ಞರಿಗೆ ಸಹಕರಿಸಲು, ನಾಗರಿಕ ಸಂಸ್ಥೆಗಳು, ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು, ಸಂಶೋಧಕರು ಮತ್ತು ಎಲ್ಲಾ ರೀತಿಯ ತಜ್ಞರಿಗೆ ಈ ಹ್ಯಾಂಡ್‌ಬುಕ್ ಅನ್ನು ತಯಾರಿಸಲಾಗಿದೆ. == ಕೊರೊನಾವೈರಸ್ ಟೆಕ್ ಹ್ಯಾಂಡ್‌ಬುಕ್‌ನಲ್ಲಿ ಏನೆಲ್ಲಾ ಒಳಗೊಂಡಿವೆ? == ಕೊರೊನಾವೈರಸ್ ಟೆಕ್ ಹ್ಯಾಂಡ್‌ಬುಕ್‌ನಲ್ಲಿ ಸ್ವಯಂ-ಪ್ರತ್ಯೇಕಿಸುವ ಟೂಲ್‌ಕಿಟ್‌ಗಳು, ಕೊರೊನಾವೈರಸ್ ಪ್ರಕೋಪಕ್ಕೆ ಹೊಂದಿಕೊಳ್ಳಲು ಸಲಹೆಗಳು , ವೈರಸ್ ಹರಡುವಿಕೆಯನ್ನು ಪತ್ತೆಹಚ್ಚುವುದು, ಜೊತೆಗೆ ಸಾರ್ವಜನಿಕ ಜ್ಞಾನ ಮತ್ತು ಅಧಿಕೃತ ಮಾಹಿತಿ ಮತ್ತು ಸಮುದಾಯದ ಸಹಾಯವನ್ನು ಒಳಗೊಂಡಿದೆ. ಈ ಸಮಯದಲ್ಲಿ ಮನೆಯಿಂದ ಕೆಲಸ ಮಾಡುವ ಮತ್ತು ಸ್ವಯಂ-ಪ್ರತ್ಯೇಕಿಸುವ ಎಲ್ಲರಿಗೂ ಇದು ಸಹಾಯಕ ಮತ್ತು ಇದು ತಿಳಿವಳಿಕೆಯ ಸಂಪನ್ಮೂಲವಾಗಿದೆ. == ಉಲ್ಲೇಖಗಳು ==